ಸರೋಜ್ ಖಾನ್(ನಿರ್ಮಲಾ ನಾಗ್ಪಾಲ್) (೨೨ ನವೆಂಬರ್ ೧೯೪೮ - ೩ ಜುಲೈ ೨೦೨೦) ಹಿಂದಿ ಚಿತ್ರರಂಗದ ಭಾರತದ ಪ್ರಮುಖ ನೃತ್ಯ ನಿರ್ದೇಶಕರಲ್ಲಿ ಒಬ್ಬರು. ಇವರು ಭಾರತದ ಬಾಂಬೆ ರಾಜ್ಯದಲ್ಲಿ (ಇಂದಿನ ಮಹಾರಾಷ್ಟ್ರ) ಜನಿಸಿದರು. ನಲವತ್ತು ವರ್ಷಗಳ ವೃತ್ತಿಜೀವನದೊಂದಿಗೆ, ಇವರು ೨೦೦೦ ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ ಮತ್ತು ಇವರನ್ನು "ದಿ ಮದರ್ ಆಫ್ ಡ್ಯಾನ್ಸ್ / ಕೊರಿಯೋಗ್ರಫಿ ಇನ್ ಇಂಡಿಯಾ" ಎಂದು ಕರೆಯಲಾಗುತ್ತದೆ. ಅಕಸ್ಮಾತಾದ ಹೃದಯ ಸ್ತಂಭನದಿಂದಾಗಿ ಇವರು ಜುಲೈ ೩, ೨೦೨೦ ರಂದು ನಿಧನರಾದರು. == ಆಯ್ದ ಫಿಲ್ಮೋಗ್ರಫಿ == ಕಲಂಕ್ (೨೦೧೯) ಮಣಿಕರ್ಣಿಕ: ದ ಕ್ವೀನ್ ಆಫ್ ಝಾನ್ಸಿ (೨೦೧೯) ತನು ವೆಡ್ಸ್ ಮನು ರಿಟರ್ನ್ಸ್ (೨೦೧೫) ಗುಲಾಬ್ ಗ್ಯಾಂಗ್ (೨೦೧೪) ಎಬಿಸಿಡಿ:ಎನಿಬಡೀ ಕ್ಯಾನ್ ಡ್ಯಾನ್ಸ್ (೨೦೧೨) ರೌಡಿ ರಾಥೋರ್ (೨೦೧೨) ಏಜೆಂಟ್ ವಿನೋದ್ (೨೦೧೨) ಖಟ್ಟಾ ಮೀಠಾ (೨೦೧೦) ಲೈಫ್ ಪಾರ್ಟ್ನರ್ (೨೦೦೯) ಲವ್ ಆಜ್ ಕಲ್ (೨೦೦೯) ದೆಹಲಿ -6 (೨೦೦೯) ಜಬ್ ವಿ ಮೆಟ್ (೨೦೦೭) (ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು) ನಮಸ್ತೆ ಲಂಡನ್ (೨೦೦೭) ಗುರು (೨೦೦೭) (ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು) ಧನ್ ಧನಾ ಧನ್ ಗೋಲ್ (೨೦೦೭) ಸಾವರಿಯಾ (೨೦೦೭) ಡಾನ್ - ದಿ ಚೇಸ್ ಬಿಗಿನ್ಸ್ ಎಗೇನ್ (೨೦೦೬) ಫನಾ(೨೦೦೬) ಮಂಗಲ್ ಪಾಂಡೆ: ದಿ ರೈಸಿಂಗ್ (೨೦೦೫) ಶೃಂಗಾರಮ್ (2005) (ತಮಿಳು) ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು ವೀರ್-ಝಾರಾ (೨೦೦೪) ಸ್ವೇಡ್ಸ್ (೨೦೦೪) ಕುಚ್ ನಾ ಕಹೋ (೨೦೦೪) ಸಾಥಿಯಾ (೨೦೦೨) ದೇವ್ದಾಸ್ (೨೦೦೨) ಅತ್ಯುತ್ತಮ ನೃತ್ಯ ಸಂಯೋಜನೆ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು ಲಗಾನ್: ಒನ್ಸ್ ಅಪಾನ್ ಎ ಟೈಮ್ ಇನ್ ಇಂಡಿಯಾ (೨೦೦೧) ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಫಿಜಾ (೨೦೦೦) ತಾಲ್ (೧೯೯೯) ಹಮ್ ದಿಲ್ ದೆ ಚುಕೆ ಸನಮ್ (೧೯೯೯) ಅತ್ಯುತ್ತಮ ನೃತ್ಯ ಸಂಯೋಜನೆ ಮತ್ತು ಅಮೇರಿಕನ್ ಕೊರಿಯೋಗ್ರಫಿ ಪ್ರಶಸ್ತಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು ಸೋಲ್ಜರ್ (೧೯೯೮) ಚೂಡಲಾನಿ ವುಂಡಿ (೧೯೯೮) ಪಿ ಫಾರ್ ಪ್ಯಾರ್ ಹೋ ಗಯಾ (೧೯೯೭) ಪಾರ್ಡೆಸ್ (೧೯೯೭) ಇರುವರ್ (೧೯೯೭) (ತಮಿಳು) ಖಾಮೋಶಿ: ದಿ ಮ್ಯೂಸಿಕಲ್ (೧೯೯೬) ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ (೧೯೯೫) ಯರಾನಾ (೧೯೯೫) ಮೊಹ್ರಾ (೧೯೯೪) ಅಂಜಾಮ್ (೧೯೯೪) ಬಾಜಿಗರ್ (೧೯೯೩) ಆಯಿನಾ (೧೯೯೩) ಡರ್ (೧೯೯೩) ಬೇಟಾ (೧೯೯೨) ಅವಾರ್ಗಿ (೧೯೯೦) ಸೈಲಾಬ್ (೧೯೯೦) ಚಾಂದ್ನಿ (೧೯೮೯) ನಿಗಾಹೇನ್: ನಾಗಿನಾ ಭಾಗ ೨ (೧೯೮೯) ತೇಜಾಬ್ (೧೯೮೮) ಕಿಝಾಕು ಆಫ್ರಿಕಾವಿಲ್ ಶೀಲಾ (೧೯೮೭) ತಮಿಳು ಚಲನಚಿತ್ರ ಮಿಸ್ಟರ್ ಇಂಡಿಯಾ (೧೯೮೭) ನಾಗಿನಾ (೧೯೮೬) ಹೀರೋ (೧೯೮೩) ಥಾಯ್ ವೀಡು (೧೯೮೩) ತಮಿಳು ಚಲನಚಿತ್ರ == ಬರಹಗಾರ್ತಿಯಾಗಿ == == ಮರಣ == ಸರೋಜ್ ಖಾನ್ ಅವರನ್ನು ಜೂನ್ ೧೭, ೨೦೨೦ ರಂದು ಮುಂಬೈನ ಬಾಂದ್ರಾದಲ್ಲಿರುವ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆ ಇದ್ದ ಕಾರಣವಾಗಿ ಅವರನ್ನು ದಾಖಲಿಸಲಾಯಿತು, ಮತ್ತು ಹೃದಯ ಸ್ತಂಭನದಿಂದ ೩ ಜುಲೈ ೨೦೨೦ ನೇ ಶುಕ್ರವಾರದಂದು ನಿಧನರಾದರು. ಇವರಿಗೆ ತೀವ್ರವಾದ ಮಧುಮೇಹ ಮತ್ತು ಅದಕ್ಕೆ ಸಂಬಂಧಿತ ಕಾಯಿಲೆ ಇತ್ತು ಮತ್ತು ಕೋವಿಡ್ ೧೯ ಗೆ ನಕಾರಾತ್ಮಕತೆಯನ್ನು ಪರೀಕ್ಷಿಸಿದ್ದರು. ಸಾಯುವ ಸಮಯದಲ್ಲಿ ಆಕೆಗೆ ೭೧ ವರ್ಷ. ಸರೋಜ್ ಖಾನ್ ಅವರ ಪತಿ ಬಿ.ಸೋಹನ್ ಲಾಲ್, ಮಗ ಹಮೀದ್ ಖಾನ್ ಮತ್ತು ಪುತ್ರಿಯರಾದ ಹಿನಾ ಖಾನ್ ಮತ್ತು ಸುಕೈನಾ ಖಾನ್ ರವರು ಇದ್ದಾರೆ. == ಉಲ್ಲೇಖಗಳು ==